ಅಭಿಪ್ರಾಯ / ಸಲಹೆಗಳು

ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 (PMKSY-WDC 2.0)

 

  ಪರಿಚಯ


ಜಲಾನಯನ ಅಭಿವೃದ್ಧಿ ವಿಧಾನವು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಆರಂಭಿಕ ಉದ್ದೇಶಗಳಿಂದ ಕ್ರಮೇಣವಾಗಿ ಕಾಲಾನಂತರದಲ್ಲಿ ವಿಕಸನಗೊಂಡು ನದಿ ಕಣಿವೆಯ ಯೋಜನೆಗಳ ಹೂಳು ತಗ್ಗಿಸುವಿಕೆಯಿಂದ ಜಲಾನಯನ ಪ್ರದೇಶದ ಜೈವಿಕ, ಭೌತಿಕ ಮತ್ತು ಸಾಮಾಜಿಕ ಅಂಶಗಳನ್ನು ನಿರ್ವಹಿಸುವ ಪ್ರಸ್ತುತ ಸಮಗ್ರ ವಿಧಾನವಾಗಿದೆ. 1994 ರಲ್ಲಿ ಅಳವಡಿಸಲಾದ ಸಹಭಾಗಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ (PWDP) ಮತ್ತು ಕಾಲಕಾಲಕ್ಕೆ ಮಾರ್ಗಸೂಚಿಗಳಲ್ಲಿ ಜಾರಿಗೊಳಿಸಲಾದ ವಿವಿಧ ತಿದ್ದುಪಡಿಗಳ ಕಾರಣದಿಂದಾಗಿ, ದೇಶದಲ್ಲಿ ಮಳೆಯಾಶ್ರಿತ ಮತ್ತು ಕ್ಷೀಣಿಸಿದ ಭೂಮಿಯನ್ನು ಅಭಿವೃದ್ಧಿಪಡಿಸುವುದರ ಹೊರತಾಗಿ ಜೀವನೋಪಾಯವನ್ನು ಭದ್ರಪಡಿಸುವುದು ಒಂದು ಪ್ರಮುಖ ಆಯಾಮವಾಗಿ ಹೊರಹೊಮ್ಮಿದೆ.

ಇದರ ಪರಿಣಾಮವಾಗಿ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಜೀವನೋಪಾಯದ ಚಟುವಟಿಕೆಗಳು ಮತ್ತು ಸುಸ್ಥಿರ ಉತ್ಪಾದನಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡ ಪ್ರಮುಖ ಸಾರ್ವಜನಿಕ ಹೂಡಿಕೆಗಳಿಗೆ ಜಲಾನಯನ ಅಭಿವೃದ್ಧಿ ವಿಧಾನವನ್ನು ಮಾದರಿಯಾಗಿ ಸ್ವೀಕರಿಸಲಾಗಿದೆ. ವಿಶೇಷವಾಗಿ ಭಾರತದಲ್ಲಿ ಮತ್ತು ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಬಹುಪಾಲು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಡುಬರುವ ಹವಾಮಾನ ಬದಲಾವಣೆಯ ಸಮಸ್ಯೆಗಳು ಮತ್ತು ಅದರ ಪರಿಣಾಮಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಹಾಗೂ ಕೃಷಿ ಉತ್ಪಾದನಾ ವ್ಯವಸ್ಥೆಗಳು, ಸುಸ್ಥಿರ ಜೀವನೋಪಾಯಕ್ಕೆ ಗಂಭೀರ ಸವಾಲುಗಳನ್ನು ಒಡ್ಡಿವೆ.

ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಾದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ (IWMP), ಬಾಹ್ಯ ಅನುದಾನಿತ ಕಾರ್ಯಕ್ರಮಗಳು, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾರ್ಯಕ್ರಮಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಇತ್ಯಾದಿಗಳಲ್ಲಿ ಮಾಡಿದ ಹೂಡಿಕೆಗಳು ಯಶಸ್ವಿಯಾಗಿವೆ.

ಸುಸ್ಥಿರ ಅಭಿವೃದ್ಧಿ ಗುರಿಗಳು (SDG) 2030, ರಾಷ್ಟ್ರೀಯವಾಗಿ ನಿರ್ಧರಿಸಿದ ಬದ್ಧತೆಗಳು (NDCs) ಮತ್ತು ಭೂಮಿ ಅವನತಿ ತಟಸ್ಥತೆ (LDN) ಅನುಸಾರ 260 ಲಕ್ಷ ಹೆಕ್ಟೇರ್ ಪ್ರದೇಶವನ್ನು ಉಪಚರಿಸುವುದು ದೇಶದ ಪ್ರಮುಖ ಬದ್ದತೆಯಾಗಿರುತ್ತದೆ. ಈ ಎಲ್ಲಾ ಅಂತಾರಾಷ್ಟ್ರೀಯ ಬದ್ಧತೆಗಳಿಗೆ ದೇಶದ ಮಳೆಯಾಶ್ರಿತ ಪ್ರದೇಶಗಳು ಗಣನೀಯ ಕೊಡುಗೆ ನೀಡಬಲ್ಲವು. ಮಳೆಯಾಶ್ರಿತ ಪ್ರದೇಶದ ರೈತರು ಈ ಉದ್ದೇಶಗಳನ್ನು ಸಾಧಿಸಲು ಕೆಲಸ ಮಾಡಿದರೆ ಅದು ಮಳೆಯಾಶ್ರಿತ ಪ್ರದೇಶಗಳು ಮತ್ತು ಅಲ್ಲಿನ ರೈತರಿಗೆ ಗೆಲುವು-ಗೆಲುವಿನ ಪರಿಸ್ಥಿತಿಯಾಗಿ ಹೊರಹೊಮ್ಮಲಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಹೆಚ್ಚಿನ ಮತ್ತು ಉದ್ದೇಶಿತ ಹೂಡಿಕೆಯ ಅಗತ್ಯವನ್ನು ಇದು ಸೂಚಿಸುತ್ತದೆ. ಆದ್ದರಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಭೂಸಂಪನ್ಮೂಲ ಇಲಾಖೆಯು 2021-22 ರಿಂದ ಇಡೀ ದೇಶದಲ್ಲಿ “ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ 2.0” (PMKSY-WDC 2.0)” ಅನುಷ್ಠಾನಗೊಳಿಸಲು ತಿರ್ಮಾನಿಸಿ, ಕರ್ನಾಟಕ ರಾಜ್ಯಕ್ಕೆ 2.75006 ಲಕ್ಷ ಹೆಕ್ಟೇರ್ ಪ್ರದೇಶದ ಗುರಿಯನ್ನು ನಿಗಧಿಪಡಿಸಲಾಗಿದೆ. ಈ ಹೊಸ ಪೀಳಿಗೆಯ ಜಲಾನಯನ ಅಭಿವೃದ್ದಿಯ ಮೂಲಕ ರಾಜ್ಯದ 30 ಜಿಲ್ಲೆಗಳ 57 ಮಳೆಯಾಶ್ರಿತ ತಾಲೂಕುಗಳ ಆಯ್ದ 57 ಉಪ ಜಲಾನಯನಗಳನ್ನು ಉಪಚರಿಸಲು ಕಾರ್ಯಕ್ರಮ ರೂಪಿಸಿದೆ.

 


ದೇಶದಲ್ಲಿನ 260 ಲಕ್ಷ ಹೆಕ್ಟೇರ್ ಪ್ರದೇಶದ ಭೂ ಅವನತಿ ತಟಸ್ಥತೆಯನ್ನು (LDN) ಸಾಧಿಸಲು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮೊದಲ ಹೆಜ್ಜೆಯಾಗಿ ಹೊಸ ಪೀಳಿಗೆಯ ಜಲಾನಯನ ಅಭಿವೃದ್ದಿ ಪರಿಕಲ್ಪನೆಯೊಂದಿಗೆ 2021-22 ನೇ ಸಾಲಿನಿಂದ ಉಪಚರಿಸಲು ಮೊದಲ ಹಂತದಲ್ಲಿ ದೇಶದ 49.50 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ದಿಪಡಿಸಲಿದೆ. ಉಳಿದ 210.50 ಲಕ್ಷ ಹೆಕ್ಟೇರ್ ಪ್ರದೇಶವನ್ನು 2022-23 ನೇ ಸಾಲಿನಿಂದ ಹಂತ ಹಂತವಾಗಿ PMKSY-WDC 2.0 ಯೋಜನೆಯಡಿ ಉಪಚರಿಸಲು ಯೋಜಿಸಲಾಗಿದೆ.

ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ 190.50 ಲಕ್ಷ ಹೆಕ್ಟೇರ್ ಗಳಿದ್ದು, ಇದರಲ್ಲಿ 129.70 ಲಕ್ಷ ಹೆಕ್ಟೇರ್ ಪ್ರದೇಶವು ಜಲಾನಯನ ಉಪಚಾರಕ್ಕೆ ಲಭ್ಯವಿದೆ. ಇದುವರೆವಿಗೂ 70.60 ಲಕ್ಷ ಹೆಕ್ಟೇರ್ ಪ್ರದೇಶವನ್ನು ವಿವಿಧ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಾಂಪ್ರದಾಯಿಕ ಜಲಾನಯನ ಉಪಚಾರಗಳೊಂದಿಗೆ ಉಪಚರಿಸಲಾಗಿದೆ. ಉಳಿದ 52.38 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಜಲಾನಯನ ಪ್ರದೇಶವು ವೈಜ್ಞಾನಿಕ ಜಲಾನಯನ ತತ್ವದ ಆಧಾರದ ಮೇಲೆ ಉಪಚಾರಕ್ಕೆ ಲಭ್ಯವಿದೆ.

ಈ ಹಿನ್ನಲೆಯಲ್ಲಿ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಭೂ ಸಂಪನ್ಮೂಲ ಇಲಾಖೆಯು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0' (PMKSY- WDC 2.0) ರಡಿ ರಾಜ್ಯದ 57 ಆಯ್ದ ತಾಲೂಕುಗಳಲ್ಲಿ 2.75006 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹೊಸ ಪೀಳಿಗೆಯ ಜಲಾನಯನ ಅಭಿವೃದ್ಧಿ ಯೋಜನೆಯಡಿ ಉಪಚರಿಸಲು ರಾಜ್ಯಕ್ಕೆ ಮೊದಲ ಹಂತದಲ್ಲಿ ಯೋಜನೆಗಳನ್ನು(Projects) ಮಂಜೂರು ಮಾಡಿದೆ. ಈ ಯೋಜನೆಗಳು ಮಳೆಯಾಶ್ರಿತ ರೈತರ ಆದಾಯವನ್ನು ಹೆಚ್ಚಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸಲು, ಸ್ಥಳೀಯ ಸಮುದಾಯ ಆಧಾರಿತ ಸಂಘಟನೆಯನ್ನು ಬಲಪಡಿಸಲು, ರೈತ ಉತ್ಪಾದಕ ಸಂಸ್ಥೆಗಳ (FPO) ರಚನೆ, ಆಸ್ತಿ ರಹಿತರಿಗೆ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸಲು, ತೋಟಗಾರಿಕೆ ಹಾಗೂ ಅರಣ್ಯೀಕರಣದ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸಲು, ಮೇವು, ಇಂಧನ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ಯೋಜನೆಯ ಪ್ರದೇಶದ ವ್ಯಾಪ್ತಿಯಲ್ಲಿ ರಚಿಸಲಾದ ಸ್ವತ್ತುಗಳ ಸುಸ್ಥಿರತೆಯನ್ನು ಕಾಪಾಡಲು ಸಹ ಸಹಕಾರಿಯಾಗಿದೆ.

 PMKSY-WDC 2.0 ಯೋಜನೆಯು ದೇಶದ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿಯ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುವುದು,  ಜಲಾನಯನ ಮಟ್ಟದಲ್ಲಿ ರೈತರಿಗೆ ಹೆಚ್ಚಿನ ಆದಾಯವನ್ನು ಸಾಧಿಸಲು ಅನುವುಮಾಡುವುದು, ಭೂರಹಿತರಿಗೆ ವಿಸ್ತರಿಸಿದ ಜೀವನೋಪಾಯದ ಆಯ್ಕೆಗಳನ್ನು ಒದಗಿಸುವುದು, ಯೋಜನೆಯ ಸವಲತ್ತುಗಳ ವಿತರಣೆಯಲ್ಲಿ ಸಮಾನತೆ, ಸಮುದಾಯದ ಮಾಲೀಕತ್ವ ಮತ್ತು ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.

ಯೋಜನೆಯ ಪ್ರಮುಖ ಉದ್ದೇಶಗಳು ಈ ಕೆಳಕಂಡಂತೆ ಇವೆ.

  • ಪರ್ಯಾಯ ಬೆಳೆ ವ್ಯವಸ್ಥೆಗಳು ಮತ್ತು ಪಶುಸಂಗೋಪನೆಯ ಮೂಲಕ ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು ಮತ್ತು ರೈತರ ಆದಾಯವನ್ನು ಭದ್ರಪಡಿಸುವುದು. ಸಮರ್ಥ ನೀರು ಕೊಯ್ಲು, ಮಣ್ಣಿನ ತೇವಾಂಶ ಸಂರಕ್ಷಣೆ ಹಾಗೂ ಯೋಜನೆಯ ಸದಸ್ಯರಿಗೆ ಸಮಾನ ಆಧಾರದ ಮೇಲೆ ನೆಲ ಮತ್ತು ಮೇಲ್ಮೈ ನೀರಿನ ಸಂಪನ್ಮೂಲಗಳ ಬಳಕೆ ಒದಗಿಸುವುದು.
  • ಯೋಜನಾ ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಮತ್ತು ಸಮರ್ಥನೀಯ ಬಳಕೆಯ ಮೂಲಕ ವಿವಿಧ ಬೆಳೆಗಳು, ಜಾನುವಾರು, ಮೀನುಗಾರಿಕೆ ಮತ್ತು ಉತ್ಪಾದನಾ ವ್ಯವಸ್ಥೆಗಳ ತೀವ್ರತೆ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು.
  • ಆಸ್ತಿರಹಿತ ಯೋಜನೆಯ ಸದಸ್ಯರನ್ನು ಗುರುತಿಸುವುದು ಮತ್ತು ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವುದು.
  • ಬಳಕೆದಾರ ಗುಂಪುಗಳನ್ನು (UG) ರಚಿಸುವ ಮೂಲಕ ಅವರಿಗೆ ಅಂತರ್ಜಲ, ಮಣ್ಣು, ಸಮುದಾಯ ಸಂಪನ್ಮೂಲಗಳಂತಹ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳು/ಆಸ್ತಿಗಳ ನಿರ್ವಹಣೆಯಲ್ಲಿ ನಿರಂತರ ಜವಾಬ್ದಾರಿಗಳನ್ನು ವರ್ಗಾಯಿಸುವುದು.
  • ಸ್ಥಳಿಯ ಜ್ಞಾನ ಮತ್ತು ವಸ್ತುಗಳ ಲಭ್ಯತೆಯ ಆಧಾರದ ಮೇಲೆ ಸರಳ, ಬಳಸಲು ಸುಲಭ ಮತ್ತು ಕೈಗೆಟುಕುವ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳನ್ನು ಉತ್ತೇಜಿಸುವುದು.
  • ಆದಾಯವನ್ನು ಉತ್ಪಾದಿಸುವ ಅವಕಾಶಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು.
  • ರೈತ ಉತ್ಪಾದಕರ ಸಂಸ್ಥೆಗಳನ್ನು (FPO) ರಚಿಸುವುದು/ಬಲವರ್ಧಿಸುವುದು.

 

ಜಲಾನಯನ ಯೋಜನೆಯ ಆಯ್ಕೆಗೆ ಕೆಳಗಿನ ಮಾನದಂಡಗಳನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತದೆ.

  1. ಬಡತನ ಸೂಚ್ಯಂಕ (% ಬಡವರ ಸಂಖ್ಯೆ)
  2. % SC/ST ಜನಸಂಖ್ಯೆ
  3. ವಾಸ್ತವ ಕೂಲಿ
  4. % ಸಣ್ಣ ಮತ್ತು ಅತಿ ಸಣ್ಣ ರೈತರು
  5. ಅಂತರ್ಜಲ ಸ್ಥಿತಿ
  6. ತೇವಾಂಶ ಸೂಚ್ಯಂಕ/DPAP/ DDP ತಾಲ್ಲೂಕು
  7. ಮಳೆಯಾಧಾರಿತ ಕೃಷಿಗೆ ಒಳಪಡುವ ಪ್ರದೇಶ
  8. ಕುಡಿಯುವ ನೀರಿನ ಲಭ್ಯತೆ
  9. ಅವನತಿ ಹೊಂದಿದ ಭೂಮಿ
  10. ಭೂಮಿಯ ಉತ್ಪಾದಕತೆಯ ಸಾಮರ್ಥ್ಯ
  11. ಈಗಾಗಲೇ ಅಭಿವೃದ್ಧಿಪಡಿಸಲಾದ/ಉಪಚರಿಸಲಾದ ಮತ್ತೊಂದು ಜಲಾನಯನ ಪ್ರದೇಶಕ್ಕೆ ಹೊಂದಿಕೊಂಡಿರುವುದು.
  12. ಗುಚ್ಚ ವಿಧಾನ (ಯೋಜನೆಯಡಿ ಒಂದಕ್ಕಿಂತ ಹೆಚ್ಚು ಸಮೀಪವಿರುವ ಕಿರು ಜಲಾನಯನ ಪ್ರದೇಶ)

ಹೊಸ ಪೀಳಿಗೆಯ ಜಲಾನಯನ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಉಪಚರಿಸಲು ಈ ಮೇಲಿನ ಮಾನದಂಡಗಳ ಆಧಾರದ ಮೇಲೆ ಈ ಕೆಳಕಂಡ 57 ತಾಲೂಕುಗಳಲ್ಲಿ 57 ಉಪ ಜಲಾನಯನಗಳನ್ನು ಆಯ್ಕೆ ಮಾಡಲಾಗಿದೆ.

ಕ್ರ.ಸಂ

  ಯೋಜನೆಯ ಹೆಸರು

ತಾಲ್ಲೂಕಿನ ಹೆಸರು

ಯೋಜನೆಯ ವಿಸ್ತೀರ್ಣ (ಹೆ)

ಒಟ್ಟು ಯೋಜನಾ ಮೊತ್ತ (ರೂ.ಲಕ್ಷಗಳಲ್ಲಿ)

1

2

3

4

5

1

ಬಾಗಲಕೋಟೆ-WDC-1/2021-22

ಹುನಗುಂದ

5500.00

1540.00

2

ಬೆಂಗಳೂರು-WDC-1/2021-22

ನೆಲಮಂಗಲ

3489.52

767.69

3

ಬೆಳಗಾವಿ-WDC-1/2021-22

ರಾಮದುರ್ಗ

6095.00

1340.90

4

ಬೆಳಗಾವಿ-WDC-2/2021-22

ಬೈಲಹೊಂಗಲ

5920.00

1657.60

5

ಬೆಳಗಾವಿ-WDC-3/2021-22

ಚಿಕ್ಕೋಡಿ

6195.00

1362.90

6

ಬಳ್ಳಾರಿ-WDC-1/2021-22

ಕೊಟ್ಟೂರು

5001.00

1400.28

7

ಬಳ್ಳಾರಿ-WDC-2/2021-22

ಬಳ್ಳಾರಿ

5000.00

1100.00

8

ಬೀದರ್‌-WDC-1/2021-22

ಔರಾದ್‌

5024.30

1105.35

9

ಬೀದರ್‌-WDC-2/2021-22

ಬಸವಕಲ್ಯಾಣ

5093.00

1120.46

10

ವಿಜಯಪುರ-WDC-1/2021-22

ಸಿಂಧಗಿ

4100.00

1148.00

11

ವಿಜಯಪುರ-WDC-2/2021-22

ಇಂಡಿ

5900.00

1652.00

12

ಚಾಮರಾಜನಗರ-WDC-1/2021-22

ಗುಂಡ್ಲುಪೇಟೆ

5322.09

1170.86

13

ಚಾಮರಾಜನಗರ-WDC-2/2021-22

ಕೊಳ್ಳೇಗಾಲ

5103.00

1122.66

14

ಚಿಕ್ಕಬಳ್ಳಾಪುರ-WDC-1/2021-22

ಚಿಕ್ಕಬಳ್ಳಾಪುರ

3960.77

871.37

15

ಚಿಕ್ಕಬಳ್ಳಾಪುರ-WDC-2/2021-22

ಚಿಂತಾಮಣಿ

4500.00

990.00

16

ಚಿಕ್ಕಮಗಳೂರು-WDC-1/2021-22

ಅಜ್ಜಂಪುರ

4466.28

982.58

17

ಚಿಕ್ಕಮಗಳೂರು-WDC-2/2021-22

ಕಡೂರು

6561.53

1443.54

18

ಚಿತ್ರದುರ್ಗ-WDC-1/2021-22

ಹಿರಿಯೂರು

5240.00

1152.80

19

ಚಿತ್ರದುರ್ಗ-WDC-2/2021-22

ಹೊಳಲ್ಕೆರೆ

5582.00

1228.04

20

ದಕ್ಷಿಣ ಕನ್ನಡ-WDC-1/2021-22

ಬೆಳ್ತಂಗಡಿ

4186.20

1172.14

21

ದಕ್ಷಿಣ ಕನ್ನಡ-WDC-2/2021-22

ಬಂಟ್ವಾಳ

5025.00

1407.00

22

ದಾವಣಗೆರೆ-WDC-1/2021-22

ಜಗಳೂರು

5340.00

1174.80

23

ದಾವಣಗೆರೆ-WDC-2/2021-22

ಚನ್ನಗಿರಿ

6413.00

1410.86

24

ಧಾರವಾಡ-WDC-1/2021-22

ಧಾರವಾಡ

4598.00

1011.56

25

ಗದಗ-WDC-1/2021-22

ಮುಂಡರಗಿ

3100.00

682.00

26

ಕಲಬುರಗಿ-WDC-1/2021-22

ಆಳಂದ

5000.00

1100.00

27

ಕಲಬುರಗಿ-WDC-2/2021-22

ಜೇವರ್ಗಿ

2296.00

505.12

28

ಹಾಸನ-WDC-1/2021-22

ಅರಸೀಕೆರೆ

6214.32

1367.15

29

ಹಾಸನ-WDC-2/2021-22

ಬೇಲೂರು

5573.47

1226.16

30

ಹಾವೇರಿ-WDC-1/2021-22

ಹಾವೇರಿ

4404.74

969.04

31

ಹಾವೇರಿ-WDC-2/2021-22

ಹಾನಗಲ್‌

4515.25

993.36

32

ಹಾವೇರಿ-WDC-3/2021-22

ಶಿಗ್ಗಾಂವ್‌

4633.68

1019.41

33

ಹಾವೇರಿ-WDC-4/2021-22

ಬ್ಯಾಡಗಿ

4025.13

885.53

34

ಹಾವೇರಿ-WDC-5/2021-22

ರಟ್ಟಿಹಳ್ಳಿ

4355.83

958.28

35

ಹಾವೇರಿ-WDC-6/2021-22

ಹಿರೇಕೆರೂರು

4191.00

922.02

36

ಹಾವೇರಿ-WDC-7/2021-22

ರಾಣಿಬೆನ್ನೂರು

6658.00

1464.76

37

ಕೊಡಗು-WDC-1/2021-22

ಸೋಮವಾರಪೇಟೆ

4818.61

1349.21

38

ಕೋಲಾರ-WDC-1/2021-22

ಮುಳಬಾಗಿಲು

3442.73

757.40

39

ಕೋಲಾರ-WDC-2/2021-22

ಶ್ರೀನಿವಾಸಪುರ

4327.57

952.07

40

ಕೊಪ್ಪಳ-WDC-1/2021-22

ಯಲಬುರ್ಗಾ

5728.15

1603.88

41

ಮಂಡ್ಯ-WDC-1/2021-22

ನಾಗಮಂಗಲ

4391.06

966.03

42

ಮೈಸೂರು-WDC-1/2021-22

ಹೆಚ್.ಡಿ.ಕೋಟೆ

4661.63

1025.56

43

ಮೈಸೂರು-WDC-2/2021-22

ಪಿರಿಯಾಪಟ್ಟಣ

4546.53

1000.24

44

ರಾಯಚೂರು-WDC-1/2021-22

ರಾಯಚೂರು

3185.00

891.80

45

ರಾಯಚೂರು-WDC-2/2021-22

ಸಿಂಧನೂರು

4220.00

928.40

46

ರಾಮನಗರ-WDC-1/2021-22

ಮಾಗಡಿ

4222.94

929.05

47

ಶಿವಮೊಗ್ಗ-WDC-1/2021-22

ಸೊರಬ

4226.00

1183.28

48

ಶಿವಮೊಗ್ಗ-WDC-2/2021-22

ಶಿಕಾರಿಪುರ

4990.50

1397.34

49

ತುಮಕೂರು-WDC-1/2021-22

ಚಿಕ್ಕನಾಯಕನಹಳ್ಳಿ

6577.81

1447.12

50

ತುಮಕೂರು-WDC-2/2021-22

ಪಾವಗಡ

5125.79

1127.67

51

ಉಡುಪಿ-WDC-1/2021-22

ಬ್ರಹ್ಮಾವರ

4749.47

1044.88

52

ಉಡುಪಿ-WDC-2/2021-22

ಕಾರ್ಕಳ

4197.29

923.40

53

ಉಡುಪಿ-WDC-3/2021-22

ಕುಂದಾಪುರ

3606.23

793.37

54

ಉತ್ತರ ಕನ್ನಡ-WDC-1/2021-22

ಕುಮಟಾ

3500.00

980.00

55

ಯಾದಗಿರಿ-WDC-1/2021-22

ಶೋರಾಪುರ

6383.14

1404.29

56

ಯಾದಗಿರಿ-WDC-2/2021-22

ಶಹಾಪುರ

5436.03

1195.93

57

ಯಾದಗಿರಿ-WDC-3/2021-22

ಯಾದಗಿರಿ

4086.41

899.01

 

Grand Total

 

275006.00

64226.15

 

PMKSY-WDC 2.0 ಅಡಿಯಲ್ಲಿ ಜಾರಿಗೊಳಿಸಲಾದ ಚಟುವಟಿಕೆಗಳನ್ನು ರಾಷ್ಟ್ರೀಯ ಮಟ್ಟದಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ.

 

ಕ್ರ ಸಂ

ವಿವಿದ ಮಟ್ಟ

ಸಮಿತಿಗಳು

ಅಧ್ಯಕ್ಷತೆ

1

ಕೇಂದ್ರ ಮಟ್ಟ

ರಾಷ್ಟ್ರೀಯ ಚಾಲನ ಸಮಿತಿ (NSC)

ಕಾರ್ಯದರ್ಶಿಗಳು (DoLR)

 

2

 

ರಾಜ್ಯ ಮಟ್ಟ

ರಾಜ್ಯಮಟ್ಟದ ಮಂಜೂರಾತಿ ಸಮಿತಿ (SLSC)

ಮುಖ್ಯ ಕಾರ್ಯದರ್ಶಿಗಳು,    ಕರ್ನಾಟಕ ಸರ್ಕಾರ.

ರಾಜ್ಯಮಟ್ಟದ ನೋಡಲ್ಏಜೆನ್ಸಿ (SLNA)

ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃಧ್ಧಿ ಆಯುಕ್ತರು, ಕರ್ನಾಟಕ ಸರ್ಕಾರ

3

ಜಿಲ್ಲಾಮಟ್ಟ

ಜನಾನಯನ ಕೋಶ & ಮಾಹಿತಿ ಕೇಂದ್ರ (WCDC)

ಜಿಲ್ಲಾಧಿಕಾರಿಗಳು.

4

ಯೋಜನೆ ಮಟ್ಟ

ಜಲಾನಯನ ಸಮಿತಿ (WC)

ಅಧ್ಯಕ್ಷರು,

ಗ್ರಾಮ ಪಂಚಾಯತಿ.

 

 

)

ಈ ಹಂತದಲ್ಲಿ ಯೋಜನೆಯ ಅನುಷ್ಠಾನಕ್ಕೆ ಮುನ್ನ ಯೋಜನಾ ವ್ಯಾಪ್ತಿಯ ಜನರ ವಿಶ್ವಾಸವನ್ನು ಗಳಿಸಲು, ರೈತ ಉತ್ಪಾದಕರ ಸಂಸ್ಥೆಗಳ ರಚನೆ/ಬಲವರ್ಧನೆಯನ್ನು ಪ್ರವೇಶದ್ವಾರ ಚಟುವಟಿಕೆಗಳಡಿ ಅನುಷ್ಠಾನ ಮಾಡಲಾಗುವುದು. ಇದಲ್ಲದೇ ಅರಿವು ಮೂಡಿಸುವ ಕಾರ್ಯಕ್ರಮಗಳಾದ ಗ್ರಾಮ ಸಭಾ, ಜಾಥಾ, ಸಮುದಾಯ ಆಧಾರಿತ ಸಂಘಗಳ ರಚನೆ ಮತ್ತು ಅವುಗಳ ಬಲವರ್ಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಲಾನಯನ ಸಮಿತಿಯ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.  ಗ್ರಾಮ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯ ಜಲಾನಯನ ಸಮಿತಿಯು ಗ್ರಾಮ ಪಂಚಾಯತಿಯ ಉಪ ಸಮಿತಿಯಾಗಿದ್ದು, ಸ್ವಸಹಾಯ ಗುಂಪು, ಬಳಕೆದಾರರ ಗುಂಪು ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಈ ಸಮಿತಿಯ ಸದಸ್ಯರುಗಳಾಗಿರುತ್ತಾರೆ. ಜಲಾನಯನ ಸಮಿತಿ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಮೂಲಕ ನಿವ್ವಳ ಯೋಜನೆ ಮತ್ತು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುವುದು.

ವಿಸ್ತೃತ ಯೋಜನಾ ವರದಿಯನ್ನು ಗ್ರಾಮ ಸಭೆ ಮತ್ತು ಜಲಾನಯನ ಸಮಿತಿಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ WCDC (Watershed Cell cum Data Center) ಸಮಿತಿಯ ಶಿಪಾರಸ್ಸಿನೊಂದಿಗೆ ಮುಖ್ಯ ಕಾರ್ಯದರ್ಶಿಗಳು/ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ದಿ ಆಯುಕ್ತರು ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಮಂಜೂರಾತಿ ಸಮಿತಿ/ ರಾಜ್ಯ ಮಟ್ಟದ ನೋಡಲ್ ಏಜನ್ಸಿಯ (SLSC/SLNA), ಅಂತಿಮ ಮಂಜೂರಾತಿ ಪಡೆದು ವಿಸ್ತೃತ ಯೋಜನಾ ವರದಿಯ ಪ್ರಕಾರ ಜಲಾನಯನ ಕಾಮಗಾರಿಗಳನ್ನು ಜಲಾನಯನ ಸಮಿತಿ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುವುದು.

ಅನುಮೋದನೆಯಾದ ವಿಸ್ತೃತ ಯೋಜನಾ ವರದಿಯಲ್ಲಿನ ಚಟುವಟಿಕೆಗಳ ಪ್ರಕಾರ ಪ್ರತಿ ವರ್ಷ  ಚಟುವಟಿಕೆ/ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಜಿಲ್ಲಾ ಮಟ್ಟದ ಸಮಿತಿಯ ಶಿಫಾರಸ್ಸಿನೊಂದಿಗೆ ಕೇಂದ್ರ ಕಛೇರಿ/SLNA ಗೆ ಸಲ್ಲಿ ಅನುಮೋದನೆ ಪಡೆದು ಅನುಷ್ಠಾನ ಮಾಡಲಾಗುವುದು.  ಪ್ರಮುಖ ಚಟುವಟಿಕೆಗಳಾದ ಬದು ಕಾಮಗಾರಿ, ಕೃಷಿ ಹೊಂಡ, ತಡೆ ಅಣೆ/ಕಿಂಡಿ ಅಣೆ, ನಾಲಾ ಬದು, ಜಿನುಗು ಕೆರೆ ಮೊದಲಾದ ಕಾಮಗಾರಿಗಳ ಮೂಲಕ ಮಳೆ ನೀರು ಸಂಗ್ರಹಣೆ ಮಾಡಿ ಇಂಗಿಸಿ, ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಕೈಗೊಳ್ಳಲಾಗುವುದು. ಇದಲ್ಲದೇ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಸಹ ಅನುಷ್ಠಾನ ಮಾಡಲಾಗುವುದು. ಉಪಚರಿಸಲಾದ ಪ್ರದೇಶದಲ್ಲಿ ಉತ್ಪಾದನಾ ವ್ಯವಸ್ಥೆ ಚಟುವಟಿಕೆಗಳ ಅನುಷ್ಠಾನ, ಸ್ವಸಹಾಯ ಗುಂಪುಗಳಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಸುತ್ತು ನಿಧಿ ವಿತರಿಸಲು ಯೋಜನೆ ರೂಪಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳ ರಚನೆ/ಬಲವರ್ಧನೆಯನ್ನು ಸಹ ಕೈಗೊಳ್ಳಲಾಗುವುದು. ಸಂಪೂರ್ಣ ಜಲಾನಯನ ಉಪಚಾರಕ್ಕೆ ಅಗತ್ಯವಿರುವ ಅನುದಾನವನ್ನು ಈ ಯೋಜನೆಯ ಕಾರ್ಯಕ್ರಮದೊಂದಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಇತರೆ ಯೋಜನೆಗಳೊಂದಿಗೆ ಒಗ್ಗೂಡಿಸುವುದರ ಮೂಲಕ ಅನುಷ್ಠಾನ ಮಾಡಲಾಗುವುದು.

ಮಂಜೂರಾದ ವಿಸ್ತೃತ ಯೋಜನಾ ವರದಿಯ ಪ್ರಕಾರ ಎಲ್ಲಾ ಚಟುವಟಿಕೆಗಳನ್ನು ಅನುಷ್ಠಾನ ಮಾಡಿದ ನಂತರ ಅಭಿವೃದ್ಧಿಪಡಿಸಲಾದ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ನಿರ್ವಹಿಸುವುದು ಮತ್ತು ಭವಿಷ್ಯದ ಬಳಕೆಗಾಗಿ ಜೀವನೋಪಾಯ ಚಟುವಟಿಕೆಗಳಡಿ ಕ್ಷೇತ್ರದೊಳಗೆ ಮತ್ತು ಹೊರಗೆ ಕಲಿತ ಅನುಭವಗಳ ಹಾಗೂ  ಪಾಠಗಳ ದಾಖಲೆ ಇಡುವುದು. ಗ್ರಾಮ ಪಂಚಾಯತಿಗಳನ್ನು ತೊಡಗಿಸಿಕೊಳ್ಳುವುದರ ಮೂಲಕ ಜಲಾನಯನ ಅಭಿವೃದ್ಧಿ ನಿಧಿಯನ್ನು ಬಳಸಿ ಯೋಜನಾ ನಂತರದ ಸುಸ್ಥಿರತೆಯನ್ನು ನಿರ್ವಹಿಸಲಾಗುವುದು.

   

ಕ್ರ.ಸಂ

  ಯೋಜನೆಯ ಹೆಸರು

ತಾಲ್ಲೂಕಿನ ಹೆಸರು

ಯೋಜನೆಯ ವಿಸ್ತೀರ್ಣ (ಹೆ)

ಒಟ್ಟು ಯೋಜನಾ ಮೊತ್ತ (ರೂ.ಲಕ್ಷಗಳಲ್ಲಿ)

ಡಿ ಪಿ ಆರ್

1

2

3

4

5

6

1

ಬಾಗಲಕೋಟೆ-WDC-1/2021-22

ಹುನಗುಂದ

5500.00

1540.00

ವೀಕ್ಷಿಸಿ

2

ಬೆಂಗಳೂರು-WDC-1/2021-22

ನೆಲಮಂಗಲ

3489.52

767.69

ವೀಕ್ಷಿಸಿ

3

ಬೆಳಗಾವಿ-WDC-1/2021-22

ರಾಮದುರ್ಗ

6095.00

1340.90

ವೀಕ್ಷಿಸಿ

4

ಬೆಳಗಾವಿ-WDC-2/2021-22

ಬೈಲಹೊಂಗಲ

5920.00

1657.60

ವೀಕ್ಷಿಸಿ

5

ಬೆಳಗಾವಿ-WDC-3/2021-22

ಚಿಕ್ಕೋಡಿ

6195.00

1362.90

ವೀಕ್ಷಿಸಿ

6

ಬಳ್ಳಾರಿ-WDC-1/2021-22

ಕೊಟ್ಟೂರು

5001.00

1400.28

ವೀಕ್ಷಿಸಿ

7

ಬಳ್ಳಾರಿ-WDC-2/2021-22

ಬಳ್ಳಾರಿ

5000.00

1100.00

ವೀಕ್ಷಿಸಿ

8

ಬೀದರ್‌-WDC-1/2021-22

ಔರಾದ್‌

5024.30

1105.35

ವೀಕ್ಷಿಸಿ

9

ಬೀದರ್‌-WDC-2/2021-22

ಬಸವಕಲ್ಯಾಣ

5093.00

1120.46

ವೀಕ್ಷಿಸಿ

10

ವಿಜಯಪುರ-WDC-1/2021-22

ಸಿಂಧಗಿ

4100.00

1148.00

ವೀಕ್ಷಿಸಿ

11

ವಿಜಯಪುರ-WDC-2/2021-22

ಇಂಡಿ

5900.00

1652.00

ವೀಕ್ಷಿಸಿ

12

ಚಾಮರಾಜನಗರ-WDC-1/2021-22

ಗುಂಡ್ಲುಪೇಟೆ

5322.09

1170.86

ವೀಕ್ಷಿಸಿ

13

ಚಾಮರಾಜನಗರ-WDC-2/2021-22

ಕೊಳ್ಳೇಗಾಲ

5103.00

1122.66

ವೀಕ್ಷಿಸಿ

14

ಚಿಕ್ಕಬಳ್ಳಾಪುರ-WDC-1/2021-22

ಚಿಕ್ಕಬಳ್ಳಾಪುರ

3960.77

871.37

ವೀಕ್ಷಿಸಿ

15

ಚಿಕ್ಕಬಳ್ಳಾಪುರ-WDC-2/2021-22

ಚಿಂತಾಮಣಿ

4500.00

990.00

ವೀಕ್ಷಿಸಿ

16

ಚಿಕ್ಕಮಗಳೂರು-WDC-1/2021-22

ಅಜ್ಜಂಪುರ

4466.28

982.58

ವೀಕ್ಷಿಸಿ

17

ಚಿಕ್ಕಮಗಳೂರು-WDC-2/2021-22

ಕಡೂರು

6561.53

1443.54

ವೀಕ್ಷಿಸಿ

18

ಚಿತ್ರದುರ್ಗ-WDC-1/2021-22

ಹಿರಿಯೂರು

5240.00

1152.80

ವೀಕ್ಷಿಸಿ

19

ಚಿತ್ರದುರ್ಗ-WDC-2/2021-22

ಹೊಳಲ್ಕೆರೆ

5582.00

1228.04

ವೀಕ್ಷಿಸಿ

20

ದಕ್ಷಿಣ ಕನ್ನಡ-WDC-1/2021-22

ಬೆಳ್ತಂಗಡಿ

4186.20

1172.14

ವೀಕ್ಷಿಸಿ

21

ದಕ್ಷಿಣ ಕನ್ನಡ-WDC-2/2021-22

ಬಂಟ್ವಾಳ

5025.00

1407.00

ವೀಕ್ಷಿಸಿ

22

ದಾವಣಗೆರೆ-WDC-1/2021-22

ಜಗಳೂರು

5340.00

1174.80

ವೀಕ್ಷಿಸಿ

23

ದಾವಣಗೆರೆ-WDC-2/2021-22

ಚನ್ನಗಿರಿ

6413.00

1410.86

ವೀಕ್ಷಿಸಿ

24

ಧಾರವಾಡ-WDC-1/2021-22

ಧಾರವಾಡ

4598.00

1011.56

ವೀಕ್ಷಿಸಿ

25

ಗದಗ-WDC-1/2021-22

ಮುಂಡರಗಿ

3100.00

682.00

ವೀಕ್ಷಿಸಿ

26

ಕಲಬುರಗಿ-WDC-1/2021-22

ಆಳಂದ

5000.00

1100.00

ವೀಕ್ಷಿಸಿ

27

ಕಲಬುರಗಿ-WDC-2/2021-22

ಜೇವರ್ಗಿ

2296.00

505.12

ವೀಕ್ಷಿಸಿ

28

ಹಾಸನ-WDC-1/2021-22

ಅರಸೀಕೆರೆ

6214.32

1367.15

ವೀಕ್ಷಿಸಿ

29

ಹಾಸನ-WDC-2/2021-22

ಬೇಲೂರು

5573.47

1226.16

ವೀಕ್ಷಿಸಿ

30

ಹಾವೇರಿ-WDC-1/2021-22

ಹಾವೇರಿ

4404.74

969.04

ವೀಕ್ಷಿಸಿ

31

ಹಾವೇರಿ-WDC-2/2021-22

ಹಾನಗಲ್‌

4515.25

993.36

ವೀಕ್ಷಿಸಿ

32

ಹಾವೇರಿ-WDC-3/2021-22

ಶಿಗ್ಗಾಂವ್‌

4633.68

1019.41

ವೀಕ್ಷಿಸಿ

33

ಹಾವೇರಿ-WDC-4/2021-22

ಬ್ಯಾಡಗಿ

4025.13

885.53

ವೀಕ್ಷಿಸಿ

34

ಹಾವೇರಿ-WDC-5/2021-22

ರಟ್ಟಿಹಳ್ಳಿ

4355.83

958.28

ವೀಕ್ಷಿಸಿ

35

ಹಾವೇರಿ-WDC-6/2021-22

ಹಿರೇಕೆರೂರು

4191.00

922.02

ವೀಕ್ಷಿಸಿ

36

ಹಾವೇರಿ-WDC-7/2021-22

ರಾಣಿಬೆನ್ನೂರು

6658.00

1464.76

ವೀಕ್ಷಿಸಿ

37

ಕೊಡಗು-WDC-1/2021-22

ಸೋಮವಾರಪೇಟೆ

4818.61

1349.21

ವೀಕ್ಷಿಸಿ

38

ಕೋಲಾರ-WDC-1/2021-22

ಮುಳಬಾಗಿಲು

3442.73

757.40

ವೀಕ್ಷಿಸಿ

39

ಕೋಲಾರ-WDC-2/2021-22

ಶ್ರೀನಿವಾಸಪುರ

4327.57

952.07

ವೀಕ್ಷಿಸಿ

40

ಕೊಪ್ಪಳ-WDC-1/2021-22

ಯಲಬುರ್ಗಾ

5728.15

1603.88

ವೀಕ್ಷಿಸಿ

41

ಮಂಡ್ಯ-WDC-1/2021-22

ನಾಗಮಂಗಲ

4391.06

966.03

ವೀಕ್ಷಿಸಿ

42

ಮೈಸೂರು-WDC-1/2021-22

ಹೆಚ್.ಡಿ.ಕೋಟೆ

4661.63

1025.56

ವೀಕ್ಷಿಸಿ

43

ಮೈಸೂರು-WDC-2/2021-22

ಪಿರಿಯಾಪಟ್ಟಣ

4546.53

1000.24

ವೀಕ್ಷಿಸಿ

44

ರಾಯಚೂರು-WDC-1/2021-22

ರಾಯಚೂರು

3185.00

891.80

ವೀಕ್ಷಿಸಿ

45

ರಾಯಚೂರು-WDC-2/2021-22

ಸಿಂಧನೂರು

4220.00

928.40

ವೀಕ್ಷಿಸಿ

46

ರಾಮನಗರ-WDC-1/2021-22

ಮಾಗಡಿ

4222.94

929.05

ವೀಕ್ಷಿಸಿ

47

ಶಿವಮೊಗ್ಗ-WDC-1/2021-22

ಸೊರಬ

4226.00

1183.28

ವೀಕ್ಷಿಸಿ

48

ಶಿವಮೊಗ್ಗ-WDC-2/2021-22

ಶಿಕಾರಿಪುರ

4990.50

1397.34

ವೀಕ್ಷಿಸಿ

49

ತುಮಕೂರು-WDC-1/2021-22

ಚಿಕ್ಕನಾಯಕನಹಳ್ಳಿ

6577.81

1447.12

ವೀಕ್ಷಿಸಿ

50

ತುಮಕೂರು-WDC-2/2021-22

ಪಾವಗಡ

5125.79

1127.67

ವೀಕ್ಷಿಸಿ

51

ಉಡುಪಿ-WDC-1/2021-22

ಬ್ರಹ್ಮಾವರ

4749.47

1044.88

ವೀಕ್ಷಿಸಿ

52

ಉಡುಪಿ-WDC-2/2021-22

ಕಾರ್ಕಳ

4197.29

923.40

ವೀಕ್ಷಿಸಿ

53

ಉಡುಪಿ-WDC-3/2021-22

ಕುಂದಾಪುರ

3606.23

793.37

ವೀಕ್ಷಿಸಿ

54

ಉತ್ತರ ಕನ್ನಡ-WDC-1/2021-22

ಕುಮಟಾ

3500.00

980.00

ವೀಕ್ಷಿಸಿ

55

ಯಾದಗಿರಿ-WDC-1/2021-22

ಶೋರಾಪುರ

6383.14

1404.29

ವೀಕ್ಷಿಸಿ

56

ಯಾದಗಿರಿ-WDC-2/2021-22

ಶಹಾಪುರ

5436.03

1195.93

ವೀಕ್ಷಿಸಿ

57

ಯಾದಗಿರಿ-WDC-3/2021-22

ಯಾದಗಿರಿ

4086.41

899.01

ವೀಕ್ಷಿಸಿ

 

Grand Total

 

275006.00

64226.15

 

 

 

 

 

 

ಇತ್ತೀಚಿನ ನವೀಕರಣ​ : 09-03-2023 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080